ಮನಸೇ! ಓ ಹರಿವ ನದಿಯೇ!
ನಿರಂತರ ನಿರಾಕಾರ ಗಾಮಿನಿಯೇ!
ಅರಿಯೆ ನೀನು ಸುಂದರ ಸರಳ!
ಕಲ್ಲು-ಬಂಡೆಗಳು,
ಇಳಿಜಾರುಗಳು,
ಮುಳ್ಳು ಪೊದೆಗಳು,
ಬೆಟ್ಟ-ಗುಡ್ಡಗಳು,
ಎಡವಿ ತಡವಿ, ನೀನು ನಿರ್ಮಲ!
ರಭಸವಾಗಿ ಭೋರ್ಗೆರದು,
ಗುಡುಗಿ ಘೂಂಕರಿಸಿ,
ಕದಡಿ ಕಲುಷಿತವಾಗಿ,
ವಿರಳವಾಗಿ, ಶಾಂತವಾಗಿ,
ತಿಳಿಯಾಗಿ ನೀನು ಸುಜಲ!
ಓಡುತ-ಓಲಾಡುತ,
ಕುಲುಕುತ ಬಳುಕುತ,
ಹಾರುತ ಬೀಳುತ,
ಕಣ್ಮನ ಸೆಳೆಯುತ,
ತಣಿಸುವ ನೀನು ಚಂಚಲ!
ಒತ್ತಡವ ಒಗೆದು,
ಜಡತೆಯನು ಜಡಿದು,
ಶಿವನ ಜಟೆಯಿಂದ ಪುಟಿದು,
ಸಂಸ್ಕರಿಸಿ, ಉದ್ಧರಿಸಿ,
ಶಮನಗೊಳಿಸುವ ಶ್ಯಾಮಲ!
No comments:
Post a Comment